ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೇಮಕಾತಿ 2023 | Chitradurga DCCB Recruitment 2023 Apply Online

Chitradurga DCCB Recruitment 2023: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಹಾಗೂ ಆಸಕ್ತರು ನಿಗದಿ ಪಡಿಸಲಾಗಿರುವ ಕೊನೆಯ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

ಈ ಹುದ್ದೆಗಳ ವಿದ್ಯಾರ್ಹತೆ, ವೇತನ ಎಷ್ಟು, ವಯೋಮಿತಿಯ ಮಾಹಿತಿ, ಅರ್ಜಿ ಶುಲ್ಕ ಎಷ್ಟಿದೆ, ಅಧಿಸೂಚನೆ ಒಳಗೊಂಡಂತೆ ಮುಂತಾದ ವಿವರಣೆಯನ್ನು ಈ ಲೇಖನದಲ್ಲಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಥೈಸಿಕೊಂಡು ಅರ್ಜಿ ಭರ್ತಿ ಮಾಡಬಹುದು.

ಸಂಕ್ಷಿಪ್ತ ಮಾಹಿತಿ:
ನೇಮಕಾತಿ ಸಂಸ್ಥೆ ಹೆಸರು: ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ
ಸಂಬಳ: 37,9000 ರಿಂದ 70,850 ರೂ.
ಹುದ್ದೆಗಳು: 68
ಉದ್ಯೋಗ ಸ್ಥಳ: ಚಿತ್ರದುರ್ಗ

ವಿದ್ಯಾರ್ಹತೆ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಪ್ರಥಮ ದರ್ಜೆ ಗುಮಾಸ್ತರು – ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ದ್ವಿತೀಯ ದರ್ಜೆ ಗುಮಾಸ್ತರು – ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಕಂಪ್ಯೂಟರ್ ಇಂಜಿನಿಯರ್ – B.E(Computer science) /BSc (Computer science) /BCA ಪದವಿ ಹೊಂದಿರಬೇಕು.
ವಾಹನ ಚಾಲಕರು – SSLC, ಲಘು ಮತ್ತು ಬೃಹತ್ ವಾಹನ ಚಾಲನೆ ಪರವಾನಗಿ ಹೊಂದಿರಬೇಕು
ಅಟೆಂಡರ್/ಸಹಾಯಕರು – SSLC

ವೇತನ ಶ್ರೇಣಿಯ ಮಾಹಿತಿ:
ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ವೇತನವನ್ನು ನಿಗದಿ ಪಡಿಸಲಾಗಿರುತ್ತದೆ.
ಸಹಾಯಕ ಪ್ರಧಾನ ವ್ಯವಸ್ಥಾಪಕರು – 40,900 ರಿಂದ 78,200 ರೂ.
ಪ್ರಥಮ ದರ್ಜೆ ಗುಮಾಸ್ತರು – 37,900 ರಿಂದ 70,850 ರೂ.
ದ್ವಿತೀಯ ದರ್ಜೆ ಗುಮಾಸ್ತರು – 30,350 ರಿಂದ 58,250 ರೂ.
ಕಂಪ್ಯೂಟರ್ ಇಂಜಿನಿಯರ್ – 30,350 ರಿಂದ 58,250 ರೂ.
ವಾಹನ ಚಾಲಕರು – 27,650 ರಿಂದ‌ 52,650 ರೂ.
ಅಟೆಂಡರ್/ಸಹಾಯಕರು – 23,500 ರಿಂದ 47,650 ರೂ.

ವಯೋಮಿತಿ ವಿವರ:
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ ‌18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷ
SC/ST/Cat-I ಅಭ್ಯರ್ಥಿಗಳಿಗೆ: 5 ವರ್ಷ

ಹುದ್ದೆಗಳ ಮಾಹಿತಿ:
ಸಹಾಯಕ ಪ್ರಧಾನ ವ್ಯವಸ್ಥಾಪಕರು – 06
ಪ್ರಥಮ ದರ್ಜೆ ಗುಮಾಸ್ತರು – 09
ದ್ವಿತೀಯ ದರ್ಜೆ ಗುಮಾಸ್ತರು – 35
ಕಂಪ್ಯೂಟರ್ ಇಂಜಿನಿಯರ್ – 02
ವಾಹನ ಚಾಲಕರು – 02
ಅಟೆಂಡರ್/ಸಹಾಯಕರು – 14

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 1,500 ರೂ.
SC/ST/Cat-I ಅಂಗವಿಕಲ, ಮಾಜಿ ಸೈನಿಕ, ಹಾಗೂ ವಿಧವಾ ಅಭ್ಯರ್ಥಿಗಳಿಗೆ: 750 ರೂ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 15-09-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-10-2023

ಪ್ರಮುಖ ಲಿಂಕ್’ಗಳು:
ಅಧಿಕೃತ ಅಧಿಸೂಚನೆ: ಡೌನ್ಲೋಡ್
ಆನ್ ಲೈನ್ ಅರ್ಜಿ: Apply Now
ಅಧಿಕೃತ ವೆಬ್ ಸೈಟ್: www.chitradurgadccbank.com

Leave a Comment